ಹೊಸದೊಂದು ಜಗತ್ತಿನೆಡೆಗೆ ಹೊರಟಿದ್ದೇನೆ
ನನ್ನನ್ನು ಬಿಟ್ಟು ಬಿಡು ನೆರಳೆ!
ಕಣ್ಣೀರಿನೊಂದಿಗೆ ಕಷ್ಟಗಳನ್ನೂ ಬೆರೆಸಿ ಇಳಿಸುವೆ
ಒಪ್ಪಿಕೊಳ್ಳುವೆಯ ಕಡಲೆ!
ಭಾರವಾಗಿದೆ ಭಾವನೆಗಳು..ಹೆಣಗಳನ್ನೂ ಕೂಡ ಹೊತ್ತು ಸಾಗಬಹುದು !
ಬೇಕು ಎಂದಷ್ಟು ದೂರವಾಗುವ ಸಂಬಂಧಗಳು !
ತುಸು ನಗುವನ್ನೂ ಸಹ ನರಕದಲ್ಲಿ ಹುಡುಕಿ ತೆಗೆಯಬಹುದು
ಅದು ನೆನಪಿನ ಅಂಗಳದಲ್ಲಿ ಸಿಗದು !
#ಅಪೂರ್ಣ_ಕವಿತೆ!