ಡ್ರಾಕುಲ ಕ್ಯಾಸ್ಟಲ್ ಒಂದು ಭವ್ಯವಾದ ಅರಮನೆಯಲ್ಲಿ
ಈಗಲೂ ಸಹ ಡ್ರಾಕುಲನ ಓಡಾಟವಿದೆ ಎನ್ನುವ ಅನುಮಾನವಿದೆ,
ಕೆಲವು ವರ್ಷಗಳ ಹಿಂದೆ ಆ ಅರಮನೆಯನ್ನು ಮಾರಾಟಕ್ಕೂ ಇಟ್ಟಿದ್ದರು
ಯಾರೂ ಕೊಂಡುಕೊಳ್ಳಲಿಲ್ಲಾ, ಒಂಬೈನೂರು
ವರ್ಷದಿಂದ ಬದುಕಿರುವ ಡ್ರಾಕುಲನ ನೋಡಿದರೆ
ಇಪ್ಪತಾರ ತರುಣನಂತೆ ಕಾಣುತ್ತಾನೆ, ರಕ್ತವನ್ನು ಹೀರುವುದರಿಂದ ಅವನು
ಎಲ್ಲರೂ ಯೌವನದಿಂದ ಮುಪ್ಪನ್ನು ಪಡೆದರೆ ಆತ,
ಮುಪ್ಪಿನಿಂದ ಯೌವನವನ್ನು ಪಡೆಯುತ್ತಾನೆ.
ಅಂತದೊಂದು ಅರಮನೆಯಲ್ಲಿ ಡ್ರಾಕುಲನ ಜೊತೆಯಲ್ಲಿಯೇ
ತಿಳಿಯದೆ ಉಳಿದು ಆ ಪ್ರದೇಶದ ನಿಗೂಢತೆಯನ್ನು
ಹೊರ ಜಗತ್ತಿಗೆ ತೋರಿಸಲು ಮುಂದಾಗುವ
ಒಬ್ಬ ಲೇಖಕನಿಂದ ಆರಂಭವಾಗುವ ಕಥೆ, ಒಂದೊಂದು ಪುಟವನ್ನು ತಿರುವುವಾಗಲೂ ಒಂದೊಂದು ತಿರುವು ಪಡೆಯುತ್ತಾ ನಮಗೆ ತಿಳಿಯದಂತೆ ಪುಸ್ತಕದೊಳಗೆ ಮುಳುಗುವಂತೆ ಮಾಡಿ ಬಿಡುತ್ತದೆ,
ಇಲ್ಲಿಯವರೆಗೂ , ಮನೆ, ಸಂಬಂಧ, ಪ್ರೀತಿ, ಹೀಗೆ ನಾನಾ ವಿಧವನ್ನು ಓದಿದವರು
ಒಂದು ವಿಭಿನ್ನವಾದ ಕಥಾವಸ್ತುವಿನ ಡ್ರಾಕುಲವನ್ನು ಆಯ್ದುಕೊಳ್ಳಬಹುದು,
1877ರಲ್ಲಿ ಅಂಗ್ಲ ಲೇಖಕ ಬ್ರಾಮ್ ಸ್ಟೋಕರ್ ”ಡ್ರಾಕುಲ” ಕೃತಿಯನ್ನು
ರಚಿಸುವ ಮುನ್ನ ಅಲ್ಲೊಂದು ಇಲ್ಲೊಂದು ಎಂದು ಕೇಳಿ ಬರುತ್ತಿದ್ದ ಕಥೆಗಳಿಗೆ ಒಂದು ರೂಪ ಕೊಟ್ಟ ಹಾಗಾಯಿತು,
ಅಲ್ಲಿಂದ ಈ ಪುಸ್ತಕವನ್ನು ಆಧಾರಿಸಿ ಹತ್ತಾರು ಅಲ್ಲ ನೂರಾರು ಚಿತ್ರಗಳು
ಇಂಗ್ಲಿಷ್ ನಲ್ಲಿ ನಿರ್ಮಾಣವಾಗಿ ಗಲ್ಲಾಪೆಟ್ಟಿಗೆ ದೋಚಿವೆ,
ಸಂಪೂರ್ಣ ಬೇರೆಯದೇ ರೀತಿಯ ಸಾಹಿತ್ಯ ಮೊದಮೊದಲು ಸ್ವಲ್ಪ ಹಿಡಿತಕ್ಕೆ ಸಿಗುವುದಿಲ್ಲಾ
ಅದರಲ್ಲೂ ಅಂಗ್ಲ ಹೆಸರುಗಳು ತುಸು ಗೊಂದಲ ತರಿಸಿದರೂ ಕಥೆಯೊಂದಿಗೆ ಬೆರೆಯುತ್ತಾ ಇದ್ದ ಹಾಗೆ
ಆ ಪಾತ್ರಗಳ ಜೊತೆಗೆ ನಾವೂ ಒಂದು ಪಾತ್ರವಾಗಿ ಬಿಡುತ್ತೇವೆ,
ಕೊನೆಯ ಐವತ್ತು ಪುಟಗಳ ರೋಚಕತೆ ನಿಜಕ್ಕೂ ಮೈ ಚುಮ್ ಎನ್ನಿಸುತ್ತದೆ,
—————————————
ಡ್ರಾಕುಲನ ಹಿನ್ನಲೆಯನ್ನು ಒಮ್ಮೆ ನೋಡೋಣ,
ಬಹುತೇಕ ಜನರು ಡ್ರಾಕುಲ ಎಂದೊಡನೆ ಥಟ್ ಎಂದು ನೆನಪಾಗುವುದು
ಬಿಸಿ ನೆತ್ತರನ್ನು ಹೀರುವ ರಕ್ತ ಪಿಪಾಸು,
ಆದರೆ ಕೌಂಟ್ ಡ್ರಾಕುಲ ಎನ್ನುವ ವ್ಯಕ್ತಿ ಹನ್ನೊಂದನೇ ಶತಮಾನದಲ್ಲಿ
ರೊಮಾನಿಯದ ಸಾಮ್ರಾಜ್ಯಕ್ಕೆ ಅರಸನಾಗಿದ್ದ ಎನ್ನುವುದು
ಬಹಳಷ್ಟು ಜನರಿಗೆ ತಿಳಿದಿಲ್ಲಾ,
ಬೆಂಕಿಯನ್ನು ಉಗುಳುವ ದುಷ್ಟರನ್ನು ಶಿಕ್ಷಿಸುವ ಡ್ರಾಗನ್’ನ್ನು
ಪೂಜಿಸುತ್ತಿದ್ದ ರಾಜ ವಂಶದಲ್ಲಿ ಹುಟ್ಟಿದ್ದರಿಂದ
ತನ್ನ ಮಗನಿಗೆ ತಂದೆ ಡ್ರಾಕುಲ ಎನ್ನುವ ಹೆಸರನ್ನು ಇಡುತ್ತಾರೆ,
ಮುಂದೆ ಬೆಳೆದು ನಿಂತು ಅಪ್ರತಿಮ ಸೇನಾನಿಯಾಗುತ್ತಾನೆ,
ಅವನ ರಾಜ್ಯದ ಮೇಲೆ ಮುಸ್ಲಿಂ ದೊರೆಗಳ ದಾಳಿಯಾಗಿ
ಸೋಲನ್ನು ಸ್ವಿಕರಿಸಿ ಹತ್ತು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದು
ನಂತರ ಮತ್ತೆ ಅವರ ಮೇಲೆರಗಿ ತನ್ನ ರಾಜ್ಯವನ್ನು ಹಿಂಪಡೆಯುತ್ತಾನೆ,
ಆಗ ನಲವತ್ತು ಸಾವಿರ ಸೈನಿಕರನ್ನು ನಿರ್ಧಕ್ಷ್ಯವಾಗಿ ಕೊಂದು,
ಅವರ ರಕ್ತವನ್ನು ಹೀರಿದ ಎಂದು ವಂದತಿಯೋ ಸತ್ಯವೋ ಹರಡಿ
ಅಂದಿನಿಂದ ಅವನ ಬಗ್ಗೆಯ ಚಿತ್ರಣವೇ ಬದಲಾಯಿತ ಹೋಯಿತು…
(ಈ ವಿಷಯಗಳು ಪುಸ್ತದಲ್ಲಿಲ್ಲಾ)
ಜಗತ್ತಿನ ಅತ್ಯುತ್ತಮ ಕೃತಿಗಳಲ್ಲಿ ಒಂದಾದ ‘ಡ್ರಾಕುಲ’
ಕನ್ನಡದೇ ಕೃತಿ ಎನ್ನುವಂತೆ ಅನುವಾದಿಸಿದ್ದಾರೆ ವಾಸುದೇವರಾವ್.