#ಹೇಯ್_ಹುಡುಗಿ! ನೀನು ಶೃಂಗರಿಸಿಕೊಂಡ ಮೇಲಷ್ಟೇ ಹಬ್ಬಗಳು ಆಗಮಿಸಿದ ಫಲವ ಪಡೆಯುವುದು! ……………… ಬೆಲೆಬಾಳುವ ಅಭರಣಗಳನ್ನು ಎಲ್ಲರ ಕಣ್ಣೂ ಕುಕ್ಕುವ ಹಾಗೆ ಪ್ರದರ್ಶನಕ್ಕೆ ಇಟ್ಟಿರುವ ನಿಮ್ಮ ಮನೆಯಲ್ಲಿ ನಿನ್ನನ್ನಾದರೂ ಬಚ್ಚಿಡಬಹುದಿತ್ತು!! ……………… ನಮ್ಮ ಮನೆಯಲ್ಲಿ ‘ಲಕ್ಷ್ಮಿಯನ್ನು ಕೂರಿಸಿದ್ದೇವೆ‘ ಎಂದು ನಿಮ್ಮಮ್ಮ ಎಲ್ಲರ ಮನೆಗೂ ಬಂದು ಹೇಳುತ್ತಿದ್ದರು, ಅಮ್ಮನೊಂದಿಗೆ ಬಂದು ನೋಡಿದರೆ, ನೀನೇನು? ಅತ್ತಿಂದಿತ್ತಾ ಇತ್ತಿಂದತ್ತಾ ಓಡಾಡುತ್ತಿದಿಯಲ್ಲ!? ……………… ಭಾಗ್ಯದ ಲಕ್ಷ್ಮಿ ಬಾರಮ್ಮ….. ಎಂದು ಭಜನೆ ಮಾಡುತ್ತಿದ್ದ ವೇಳೆಯಲ್ಲಿ ಮನೆಯ ಒಳ ಬಂದ ನಿನ್ನನ್ನು ಕಂಡ ನನಗೆ ಮಾತ್ರವೇ ಲಕ್ಷ್ಮಿಯ ದರ್ಶನವಾಗಿದ್ದು!!! ……………… ನೀನು ಶೃಂಗರಿಸಿಕೊಳ್ಳುವುದಕ್ಕಾಗಿಯೇ ಹಬ್ಬಗಳು ಬರುವುದೋ!?, ಹಬ್ಬಗಳಿಗಾಗಿ ನೀನು ಶೃಂಗರಿಸಿಕೊಳ್ಳುತ್ತೀಯೋ!?